February 2026
ಹುಬ್ಬಳ್ಳಿಯ ಹಿಂದೂ ಬಂಧು ಸಮಾವೇಶ
ಫೆ 26ಕ್ಕೆ ಹುಬ್ಬಳ್ಳಿಯ ಹಿಂದೂ ಬಂಧು ಸಮಾವೇಶಕ್ಕೆ ಆಗಮಿಸಲಿರುವ ಯತ್ನಾಳ
ಹಿಂಧೂ ಧರ್ಮದ ಏಕತೆಗೆ ಹಗಲಿರುಳು ಶ್ರಮಿಸಿ ಹಿಂದೂ ಸಮಾಜವನ್ನು ಬಲಪಡಿಸಿ ಅಖಂಡ ಭಾರತವನ್ನು ಕಟ್ಟಲು ತನ್ನ ಪಣವನ್ನೆ ದೇಶಕ್ಕಾಗಿ ಸಮರ್ಪಿಸಿಕೊಂಡಂತಹ ಸ್ವಾತಂತ್ರ್ಯ ಸೇನಾನಿ ಶ್ರೀ ವೀರ ವಿನಾಯಕ ದಾಮೋದರ ಸಾವರಕರ್ ರವರ 60ನೇ ಪುಣ್ಯತಿಥಿ ಅಂಗವಾಗಿ ಅವರನ್ನು ಸ್ಮರಿಸಲು ಹಾಗೂ ಹಿಂದೂ ಸಮಾಜದ ಎಲ್ಲಾ ಪಂಗಡಗಳನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಹಿಣಧೂ ಶಕ್ತಿ ಸೇನಾ ಸಂಘಟನೆಯು ಹಿಂದು-ಬಂಧೂ ಸಮಾವೇಶವನ್ನು ಹಾಗೂ ವೀರ ವಿನಾಯಕ ದಾಮೋದರ ಸಾವರ್ಕರ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇಟ್ಟು ಕೊಂಡಿರುತ್ತವೆ. ಕಾರಣ ಹಿಂದು ಸಮಾಜದ ಬಾಂಧವರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಸಮಾಜ ಯಾಗಲೂ ಒಂದೇ ಎಂಬ ಮಂತ್ರವನ್ನು ಜಗತ್ತಿಗೆ ತೋರಿಸಲು ಎಲ್ಲರೂ ಕೈ ಗೂಡಿಸಿ ಈ ಸಮಾವೇಶಕ್ಕೆ ತಮ್ಮನ್ನು ಹೃದಯ ಪೂರ್ವಕವಾಗಿ ಆವ್ಹಾನಿಸುತ್ತಿದ್ದೇವೆ.
ಕಾರ್ಯಕ್ರಮದ ವಿವರಣೆ : • ಹಿಂದು-ಬಂಧು ಸಮಾನೇಶಕ್ಕೆ ಚಾಲನೆ. ಧ್ವಜಾರೋಹಣ ಹಾಗೂ ವಂದೇ ಮಾತರಂ ರಾಷ್ಟ್ರಗೀತೆ ಭಕ್ತಿ ಗೀತೆ ಗಣ್ಯರ ಪರಿಚಯ ಸ್ವಾತಂತ್ರ್ಯ ಸೇನಾನಿ ಶ್ರೀ ವೀರ ವಿನಾಯಕ ದಾಮೋದರ ಸಾವರಕರ ಅವರ 60ನೇ ಪುಣ್ಯ ತಿಥಿ ಅಂಗವಾಗಿ ಶ್ರದ್ಧಾಂಜಲಿ ಹಾಗೂ ಪುಷ್ಪಾರ್ಪಣೆ • ಪೂಜ್ಯ ಸ್ವಾಮಿಜೀ ಅವರಿಂದ ಹಿಂದೂ ಶಕ್ತಿ ಸೇನಾ ಕಾರ್ಯ ಸಂಕಲದ ವಿವರಣೆ ಹಾಗೂ ಆಶೀರ್ವಚನ ಅಂತರ್ಜಾಲ ಗಣ್ಯರಿಂದ ಲೋಕಾರ್ಪಣೆ • ಹಿಂದೂ ಸಮಾಜದ ಎಲ್ಲಾ ಮುಖಂಡರಿಗೆ ಸನ್ಮಾನ
ಪ್ರಮೋದ ಮುತಾಲಿಕ ಅವರಿಂದ ಹಿಂದೂ ಧರ್ಮ ರಕ್ಷಣೆ" ಭಾಷಣ ಮುಖ್ಯ ವಕ್ತಾರರಾದ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಧರ್ಮ ಜಾಗೃತಿಯ ಕುರಿತು ಹಿತನುಡಿಗಳು • ಹಿಂದೂಸ್ತಾನದ ದೇಸಿ ಕಲೆಗಳ ಪ್ರದರ್ಶನ ಮಲ್ಲ ಕಂಬ ಪ್ರದರ್ಶಿಸುವವರು : ವೀರರಾಣಿ ಕಿತ್ತೂರು ಚನ್ನಮ್ಮ ಸೇವಾ ಸಂಸ್ಥೆ, ಸಾ ಯಣವಾಳ ತಾ. ಕುಂದಗೋಳ, ಧಾರವಾಡ, ಧರ್ಮ ಚೇತನ ಸಮಿತಿ, ಹುಬ್ಬಳ್ಳಿ ಇವರಿಂದ ಕತ್ತಿವರಸೆ ಹಾಗೂ ಲಾಠಿ ಕಲೆ ಪ್ರದರ್ಶನ ದಿನಾಂಕ 26-2-2026. ಮೂರುಸಾವಿರಮಠ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಪ್ರಭು ಹುಕ್ಕೇರಿಮಠ ತಿಳಿಸಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುವ ವೀರಶೈವ ಲಿಂಗಾಯತ ಪ್ರಿಯದ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯ ಮಾರ್ಚ್ 01 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಮಾಜದ ಯುವಕರಿಗೆ ಉತ್ಸಾಹ ತುಂಬಲು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಇವರಿಗೆ ಕಾಂಗ್ರೇಸ್ ಮುಖಂಡರಾದ ನಾಗರಾಜ ಗೌರಿ ಇವರು ಆಮಂತ್ರಣ ನೀಡಿದರು
ಇಂದು ಧಾರವಾಡದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಶ್ರೀಗಂಧ ಫೌಂಡೇಶನ್ ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ 'ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಮಾಸಾಚರಣೆಯ' ಸಮಾರೋಪ ಸಮಾರಂಭವನ್ನು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಘಟಕದ ಆಯುಕ್ತರಾದ ಎನ್ ಶಶಿಕುಮಾರ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು